ಪ್ರಕೃತಿಯ ವರದಾನ: ಆತ್ರೇಯ ತೋಟದಮನೆ
ಆತ್ಮೀಯ ಬಂಧುಗಳೇ,
ಈ ದಿನದ ಹಾರ್ದಿಕ ಶುಭಾಶಯಗಳು.
ಆತ್ರೇಯ ಆಯರ್ಧಾಮ - Athreya Health paradise, # 2479/1, 17th Main, 25th Cross, BSK 2nd Stage, Bangalore560070 ತಮಗೆ ತಿಳಿದಿರುವಂತೆ ಆಯುರ್ವೇದ, ಯೋಗ, ನೈಸರ್ಗಿಕ ಚಿಕಿತ್ಸೆ ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಗಳ ಮೂಲಕ ನಿಮ್ಮ ಸೇವೆ ಸಲ್ಲಿಸುತ್ತಿದ್ದು,ಜೊತೆಗೆ ಸಾವಯವ ಕೃಷಿ ಆಹಾರ ಪದಾರ್ಥಗಳು, ತರಕಾರಿ, ಹಣ್ಣು ಹಂಪಲುಗಳು, ಕೋಲ್ಡ್ ಪ್ರೆಸ್ ಖಾದ್ಯ ತೈಲಗಳು, ರುಚಿಯಾದ ಸಂಕೇತಿ ತಿಂಡಿ ತಿನಿಸುಗಳು,
ಸೌಂದರ್ಯವರ್ಧಕ ಮತ್ತು ಪ್ರಸಾದನ ಪರಿಕರಗಳನ್ನು ಸರಬರಾಜು ಮಾಡುವ ಮೂಲಕ ನಿಮ್ಮ ಆರೋಗ್ಯ ರಕ್ಷಣೆ ಹಾಗೂ ಗುಣ ಮಟ್ಟದ ಜೀವನಕ್ಕೆ ಪೂರಕವಾಗಿ ಒಂದಿಷ್ಟು ಕಾಯಕ ಮಾಡುತ್ತಿರುವುದು ನಿಮಗೆ ತಿಳಿದಿದೆ ಎಂದು ಭಾವಿಸುತ್ತೇನೆ.
ಈ ದಿನಗಳಲ್ಲಿ ಎಲ್ಲರೂ ತಮ್ಮ ಕುಟುಂಬದ ಮದುವೆ, ನಿಶ್ಚಿತಾರ್ಥ, ನಾಮಕರಣ, ಆರತಕ್ಷತೆ, ಚೌಲ,ಉಪನಯನ, ಸಂತೋಷ ಕೂಟ, ವಿವಾಹ ಪೂರ್ವ ಫೋಟೋ ಶೂಟ್, ವಿವಾಹ ವಾರ್ಷಿಕೋತ್ಸವ, ಹಾಗೂ ಇತರೆ ಧಾರ್ಮಿಕ, ವೈದಿಕ, ಕೌಟುಂಬಿಕ ಹಾಗೂ ಸಾಂಸ್ಕೃತಿಕ ಸಮಾರಂಭಗಳನ್ನು ವಿಶಿಷ್ಟ ರೀತಿಯಲ್ಲಿ, ನೈಸರ್ಗಿಕ ಸುಂದರ ತಾಣಗಳಲ್ಲಿ ಬಹಳ ದಿನ ಮನದಲ್ಲಿ ಉಳಿಯುವಂತೆ ನೆರವೇರಿಸಿ ಸಂಭ್ರಮ ಪಡುವ ಪರಿಕಲ್ಪನೆಯನ್ನು ಗಮನಿಸಿ,
ನಿಮ್ಮ ಅಭಿರುಚಿಗೆ ಹೊಂದಿಕೊಳ್ಳುವ ಒಂದು ಸುಂದರ ತಾಣ ದಕ್ಷಿಣ ಬೆಂಗಳೂರು, ಕನಕಪುರ ರಸ್ತೆಯಲ್ಲಿರುವ ತರಳು ಎಸ್ಟೇಟ್ನಲ್ಲಿ
ATHREYA FARMS - ಆತ್ರೇಯ ತೋಟದ ಮನೆ ಸ್ಥಾಪಿತಗೊಂಡಿದ್ದು ಕೈ ಬೀಸಿ ಕರೆಯುತ್ತಿದೆ.
ಬಂಧುಗಳೇ ಬನ್ನಿ,
ಈ ತೋಟದಲ್ಲಿರುವ ಸೌಲಭ್ಯಗಳು ಹಾಗೂ ಸೇವೆಗಳ ಬಗ್ಗೆ ತಿಳಿಯೋಣ.
ಬನಶಂಕರಿ ದೇವಸ್ಥಾನದಿಂದ ಕೇವಲ 18 ಕಿಮೀ ದೂರದಲ್ಲಿ ಕಗ್ಗಲೀಪುರ - ಬನ್ನೇರುಘಟ್ಟ ರಸ್ತೆಯ ಸನಿಹದಲ್ಲಿರುವ ತರಳು ಎಸ್ಟೇಟ್ ನಲ್ಲಿ ಅಡಿಕೆ, ತೆಂಗು, ಕಾಫಿ ಇತ್ಯಾದಿ ಬೆಳೆಗಳ ಸುಂದರ ತೋಟದಲ್ಲಿದೆ ಆತ್ರೇಯ ತೋಟದ ಮನೆ.
ಸುಂದರವಾದ ಕೆರೆ ಅಂಗಳದ ಎರಡು ಎಕರೆ ಜಮೀನಿನಲ್ಲಿ ಹಾಗೂ ಆಸುಪಾಸಿನಲ್ಲಿ ,, ಸುಮಾರು 100 ವಾಹನಗಳನ್ನು ನಿಲ್ಲಿಸುವ ಸೌಲಭ್ಯವನ್ನು ಹೊಂದಿದೆ.ತೋಟಕ್ಕೆ ಹೊಂದಿ ಕೊಂಡಂತೆ 120 ಜನ ಸಂಭ್ರಮಿಸಲು
ವಿಸ್ತಾರವಾದ ಹೆಂಚಿನ ಮನೆ,
400 ಜನ ಭಾಗವಹಿಸುವಸ್ಟು ವಿಸ್ತಾರವಾದ ಹಸಿರು ಹುಲ್ಲು ಹಾಸಿನ ಸಭಾಂಗಣ ಮತ್ತು
ಮೇಲ್ಛಾವಣಿ ಹೊಂದಿರುವ ಸಭಾ ವೇದಿಕೆ, 100 ಜನ ಒಟ್ಟಿಗೆ ಊಟ ಮಾಡುವಷ್ಟು ಒಳಾಂಗಣ ಹಾಗೂ 150 ಜನರಿಗೆ ಹೊರಾಂಗಣ ವ್ಯವಸ್ಥೆ ಇದೆ.
ಆತ್ರೇಯ ತೋಟದ ಮನೆ 500 ಜನರ ಸಮಾರಂಭಗಳಿಗೆ ಬೇಕಾಗುವ ಅಡುಗೆ ಪಾತ್ರೆಗಳು ಹಾಗೂ ಸುಸಜ್ಜಿತ ಅಡುಗೆ ಮನೆಯ ವ್ಯವಸ್ಥೆಯನ್ನು ಹೊಂದಿದೆ.
ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮಗಳು, ಹೋಮ, ಹವನ, ಯಜ್ಞ ಮತ್ತು ಯಾಗಗಳನ್ನು ಮಾಡಲು ಅನ್ನಪೂರ್ಣೇಶ್ವರಿ ಸನ್ನಿಧಾನ ಹಾಗೂ ವಿಸ್ತಾರವಾದ ವೇದಿಕೆಯನ್ನು ಹೊಂದಿದೆ.
50 ರಿಂದ 60 ಜನರಿಗೆ ತಂಗಲು ಸುಸಜ್ಜಿತ 10 ರೂಮುಗಳು ಹಾಗೂ ಹಾಲುಗಳೊಂದಿಗೆ ವಸತಿ ವ್ಯವಸ್ಥೆಯನ್ನು ಹೊಂದಿದೆ.
ನೈಸರ್ಗಿಕ ನೀರಿನ ಈಜು ಕೊಳ,
ಕಣ್ಣು ಮನಸ್ಸಿಗೆ ಮುದ ನೀಡುವ ಜಲಪಾತ, ಕಾರಂಜಿ, ತುಂತುರು ಮಳೆ ವೇದಿಕೆ ಹಾಗೂ ಚಿಕ್ಕ ಚಿಕ್ಕ ಗೂಡು ಮನೆಗಳು, ಕುಟೀರ ಗಳು, ಸುಸಜ್ಜಿತ ಹಾಗೂ ಆಕರ್ಷಣೀಯ ಪ್ರಸಾದನ ಕೊಠಡಿ ಮತ್ತು ಉಯ್ಯಾಲೆ ಎಂಥವರನ್ನೂ ಆಕರ್ಷಿಸುತ್ತದೆ.
ಫೋಟೋ ಶೂಟ್ ಗೆ ಪೂರಕವಾಗಿ ಸಾಂಪ್ರದಾಯಿಕ ಹಾಗೂ ಆಧುನಿಕ ಕೃಷಿ ಪದ್ಧತಿ ಗಳಲ್ಲಿ ಉಪಯೋಗಿಸುವ ಎತ್ತಿನ ಗಾಡಿ ಮತ್ತು ಇತರೆ ಉಪಕರಣಗಳು, power Tiller, Tractor ಇತ್ಯಾದಿಗಳ ವ್ಯವಸ್ಥೆ ಹಾಗೂ ಪರಿಚಯ.
ಹಳ್ಳಿಕಾರ್ ಮತ್ತು ಗುಜರಾತ್ ಗೀರ ತಳಿಯ ಹಸುಗಳು, ಕುದುರೆ ಸವಾರಿ ಮಾಡಲು ಅನುವು.
ಆಯುರ್ವೇದ ಯೋಗ ಮತ್ತು ನೈಸರ್ಗಿಕ ಚಿಕಿತ್ಸೆಗಳ ಬಗ್ಗೆ ಮಾಹಿತಿ.
ಆಯುರ್ವೇದ, ಪಾರಂಪರಿಕ ಮತ್ತು ಮನೆ ಮದ್ದು ಪದ್ಧತಿಗಳಲ್ಲಿ ಉಪಯೋಗಿಸುವ ಗಿಡ ಮೂಲಿಕೆ ಗಳ ಪರಿಚಯ.
ಪುಟಾಣಿ ಗಳಿಗೆ ಆಡಲು ಆಟಿಕೆಗಳು ಮತ್ತು ಕ್ರೀಡಾ ಸಲಕರಣೆಗಳು
ಸಾಂಪ್ರದಾಯಿಕ ಮತ್ತು
ದೇಸಿ ಆಟಗಳು ಮತ್ತು ಕ್ರೀಡಾ ಯೋಗ.
ಕೊನೆಯದಾಗಿ ರಾತ್ರಿ ತಂಗುವವರಿಗೆ ಕ್ಯಾಂಪ್ ಫೈರ್ ವ್ಯವಸ್ಥೆ.
ಜೊತೆಗೆ ಶಾಲಾ ಕಾಲೇಜುಗಳ ಮಕ್ಕಳಿಗೆ ಒಂದು ದಿನದ ಶೈಕ್ಷಣಿಕ ಹಾಗೂ ಪ್ರವಾಸ ಸ್ಥಳವಾಗಿದೆ.
ಲೇಡೀಸ್ ಕ್ಲಬ್, ಕಿಟ್ಟಿ ಪಾರ್ಟಿ ಗ್ರೂಪ್, ಫ್ಯಾಮಿಲಿ ಗ್ರೂಪ್ ಅಸೋಸಿಯೇಷನ್ ಮತ್ತು ಫ್ರೆಂಡ್ಸ್ ಕ್ಲಬ್, ಆಫೀಸ್ ಗ್ರೂಪ್ ಇವರುಗಳಿಗೆ ಒಂದು ದಿನದ ಅವಿಸ್ಮರಣೀಯ ಅನುಭವಕ್ಕೆ ಹಾಗೂ ದೇಹ ಮತ್ತು ಮನಸ್ಸುಗಳಿಗೆ ವಿಶ್ರಾಂತಿ ಕೊಡುವ ವೇದಿಕೆಯಾಗಿದೆ.
ಬನ್ನಿ ಒಮ್ಮೆ ಅತ್ರೇಯ ತೋಟದ ಮನೆಗೆ ಭೇಟಿ ನೀಡೋಣ
ನಮ್ಮ ವಿಶೇಷ ಅಂದರೆ
ಕೇವಲ 450000/ರೂ ಗಳಲ್ಲಿ ಯಾವುದೇ ಕಾರ್ಯ ಕ್ರಮಗಳನ್ನು ನಮ್ಮಲ್ಲಿರುವ ಎಲ್ಲ ಸೌಲಭ್ಯಗಳನ್ನು ಉಪಯೋಗಿಸುವುದೊಂದಿಗೆ ಯಾವುದೇ ಜವಾಬ್ದಾರಿ ಮತ್ತು ಸಂಕೋಲೆಗಳಿಲ್ಲದೆ ಮೊದಲನೆ ದಿನ 50 - 60 ಜನ ಮತ್ತು ಎರಡನೇ ದಿನ 250 ಜನಕ್ಕೆ ನಿಮ್ಮ ಅಭಿರುಚಿಗೆ ತಕ್ಕಂತೆ ಉೂಟ ಉಪಚಾರಗಳ ಸಮೇತ ಅತ್ಯಂತ ವಿಜಂಭಣೆಯಿಂದ ಅತಿಥಿ ಸತ್ಕಾರ ಸ್ವೀಕರಿಸುವ ವ್ಯವಸ್ಥೆ ಇದೆ.